ವಿಶ್ವ ಮಾನವ ಸಂದೇಶ ಸಾರುತ್ತಾ ಯುವಜನರ ಪಯಣ…
ಬೈಕ್ ಮೇಲೆ ಕೂತು, ಫ್ರೆಂಡ್ಸ್ ಜೊತೆ ಕಾಡಿನ ಮಧ್ಯೆ ಸುತ್ತಾಡೊದು ಅಂದ್ರೆ ಯಾರಿಗೆ ತಾನೆ ಇಷ್ಟಾ ಆಗಲ್ಲಾ ಹೇಳಿ..? ದಾರಿಯಲ್ಲಿ ಕೂಗಾಡ್ತಾ, ಹಾಡ್ತಾ, ಆಕ್ಸಿಲೇಟರ್ ರೈಸ್ ಮಾಡಕೊಂಡು ಹೊಗ್ತಿದ್ರೆ ಅದರ ಮಜಾನೇ ಬೇರೆ ಅಲ್ವಾ..? ಇದು ನಮ್ಮಂತಾ ಯೂತ್ಸ್‌ಗೆ ಹೊಸದೇನಲ್ಲಾ ಬಿಡಿ ಅಂತೀರಾ…! ನಿಜಾನೆ, ಈ ತರ ಸುತ್ತಾಡ್ತಾ ಖುಷೀಲಿ ಎಲ್ಲಾ ಟೆನ್ಷನ್ ಮರೆತು ಸಂಭ್ರಮಿಸಬೇಕು ಅನ್ಕೊಳ್ಳೋದು ನಮ್ಮೆಲ್ರಿಗೂ ಕಾಮನ್ನೆ, ನಾವೂ ಕೂಡ ಹೀಗೇ ಅನ್ಕೊಂಡು ಬೈಕ್ ಹತ್ತಿದ್ದೀವಿ, ಆದ್ರೆ ನಮ್ಮ ತಿರುಗಾಟದಲ್ಲಿ ಒಂದಿಷ್ಟು ಹೊಸದಿದೆ. ನಮ್ದೇಶ ಬಹು ಬಣ್ಣಗಳ ಚಿತ್ತಾರ ಅಂತಾರೆ, ನಿಜಾ ಅಲ್ವಾ? ಒಂದ್ಕಡೆ ಇರೋ ಥರಾ ಮತ್ತೊಂದ್ ಕಡೆ ಇರಲ್ಲಾ, ಅಲ್ಲಿನ ಜನಕ್ಕೆ ಅವರವರ್‍ದೆ ಲೈಫ್ ಸ್ಟೈಲು, ಹಾಕೋ ಬಟ್ಟೆ, ಅವರ ಮಾತು, ಅವರ ದೇವರ ಕಲ್ಪನೆ ಎಲ್ಲಾನೂ ಬೇರೆ ಬೇರೆ ಅಲ್ವಾ? ಈ ವೈವಿಧ್ಯತೇನೆ ನಮ್ದೇಶದ ಹೆಮ್ಮಯ ವಿಷ್ಯ. ಹೀಗೆ ಅದೆಷ್ಟೊ ಶತಮಾನಗಳಿಂದ ನಾವೆಲ್ಲಾ ಒಟ್ಟಿಗೆ ಬದುಕ್ತಾ ಬಂದಿದ್ದೀವಿ ಅಂತ ನೋಡಿದ್ರೆ ಖುಷಿಯಾಗುತ್ತೆ. ನಮ್ಮ ನಡೆ-ನುಡಿ, ಆಚಾರ-ವಿಚಾರ ಬೇರೆ ಬೇರೆ ಆದ್ರೂ ಕೂಡಿ ಬಾಳೊಕೆ ಸಾಧ್ಯ ಇದೆ ಅಂದ್ರೆ ಅದಕ್ಕೆ ಕಾರಣ ನಾವೆಲ್ಲಾ ಮನುಷ್ಯರು ಅನ್ನೋದು. ಹೀಗೆ ನಮ್ಮ ಮಧ್ಯೆ ಬಾಂಧವ್ಯನಾ ಗಟ್ಟಿ ಮಾಡ್ಕೊಳಕ್ಕೆ ಅಂತಾನೆ ಇಲ್ಲೇ ಹುಟ್ಟಿದ ಕುವೆಂಪು ಅವರು ಸೀಕ್ರೇಟ್ ಒಂದನ್ನ ಹೇಳಿ ಹೋಗಿದಾರೆ, ಅದೇ ‘ವಿಶ್ವಮಾನವ ಸಂದೇಶ’. “ಇಲ್ಲಿ ಮನುಷ್ಯ ಬದುಕೋಕೆ ಶುರುಮಾಡ್ದಾಗ...