ವಿಶ್ವ ಮಾನವ ಸಂದೇಶ ಸಾರುತ್ತಾ ಯುವಜನರ ಪಯಣ…

ಬೈಕ್ ಮೇಲೆ ಕೂತು, ಫ್ರೆಂಡ್ಸ್ ಜೊತೆ ಕಾಡಿನ ಮಧ್ಯೆ ಸುತ್ತಾಡೊದು ಅಂದ್ರೆ ಯಾರಿಗೆ ತಾನೆ ಇಷ್ಟಾ ಆಗಲ್ಲಾ ಹೇಳಿ..? ದಾರಿಯಲ್ಲಿ ಕೂಗಾಡ್ತಾ, ಹಾಡ್ತಾ, ಆಕ್ಸಿಲೇಟರ್ ರೈಸ್ ಮಾಡಕೊಂಡು ಹೊಗ್ತಿದ್ರೆ ಅದರ ಮಜಾನೇ ಬೇರೆ ಅಲ್ವಾ..? ಇದು ನಮ್ಮಂತಾ ಯೂತ್ಸ್‌ಗೆ ಹೊಸದೇನಲ್ಲಾ ಬಿಡಿ ಅಂತೀರಾ…! ನಿಜಾನೆ, ಈ ತರ ಸುತ್ತಾಡ್ತಾ ಖುಷೀಲಿ ಎಲ್ಲಾ ಟೆನ್ಷನ್ ಮರೆತು ಸಂಭ್ರಮಿಸಬೇಕು ಅನ್ಕೊಳ್ಳೋದು ನಮ್ಮೆಲ್ರಿಗೂ ಕಾಮನ್ನೆ, ನಾವೂ ಕೂಡ ಹೀಗೇ ಅನ್ಕೊಂಡು ಬೈಕ್ ಹತ್ತಿದ್ದೀವಿ, ಆದ್ರೆ ನಮ್ಮ ತಿರುಗಾಟದಲ್ಲಿ ಒಂದಿಷ್ಟು ಹೊಸದಿದೆ.
ನಮ್ದೇಶ ಬಹು ಬಣ್ಣಗಳ ಚಿತ್ತಾರ ಅಂತಾರೆ, ನಿಜಾ ಅಲ್ವಾ? ಒಂದ್ಕಡೆ ಇರೋ ಥರಾ ಮತ್ತೊಂದ್ ಕಡೆ ಇರಲ್ಲಾ, ಅಲ್ಲಿನ ಜನಕ್ಕೆ ಅವರವರ್‍ದೆ ಲೈಫ್ ಸ್ಟೈಲು, ಹಾಕೋ ಬಟ್ಟೆ, ಅವರ ಮಾತು, ಅವರ ದೇವರ ಕಲ್ಪನೆ ಎಲ್ಲಾನೂ ಬೇರೆ ಬೇರೆ ಅಲ್ವಾ? ಈ ವೈವಿಧ್ಯತೇನೆ ನಮ್ದೇಶದ ಹೆಮ್ಮಯ ವಿಷ್ಯ. ಹೀಗೆ ಅದೆಷ್ಟೊ ಶತಮಾನಗಳಿಂದ ನಾವೆಲ್ಲಾ ಒಟ್ಟಿಗೆ ಬದುಕ್ತಾ ಬಂದಿದ್ದೀವಿ ಅಂತ ನೋಡಿದ್ರೆ ಖುಷಿಯಾಗುತ್ತೆ. ನಮ್ಮ ನಡೆ-ನುಡಿ, ಆಚಾರ-ವಿಚಾರ ಬೇರೆ ಬೇರೆ ಆದ್ರೂ ಕೂಡಿ ಬಾಳೊಕೆ ಸಾಧ್ಯ ಇದೆ ಅಂದ್ರೆ ಅದಕ್ಕೆ ಕಾರಣ ನಾವೆಲ್ಲಾ ಮನುಷ್ಯರು ಅನ್ನೋದು. ಹೀಗೆ ನಮ್ಮ ಮಧ್ಯೆ ಬಾಂಧವ್ಯನಾ ಗಟ್ಟಿ ಮಾಡ್ಕೊಳಕ್ಕೆ ಅಂತಾನೆ ಇಲ್ಲೇ ಹುಟ್ಟಿದ ಕುವೆಂಪು ಅವರು ಸೀಕ್ರೇಟ್ ಒಂದನ್ನ ಹೇಳಿ ಹೋಗಿದಾರೆ, ಅದೇ ‘ವಿಶ್ವಮಾನವ ಸಂದೇಶ’.
“ಇಲ್ಲಿ ಮನುಷ್ಯ ಬದುಕೋಕೆ ಶುರುಮಾಡ್ದಾಗಿಂದ ಇಲ್ಲಿವರೆಗು ಸುಮಾರಷ್ಟು ಮಹನೀಯರು ಬಂದು ಹೋಗಿದ್ದಾರೆ, ಆಯಾ ಕಾಲದ ಮಾನವನ ಅಗತ್ಯಗಳನ್ನ ಪೂರೈಸಿಕೊಂಡು ಎಲ್ಲರೂ ನೆಮ್ಮದಿಯಿಂದ ಬದುಕೋದಕ್ಕೆ ಅಂತಾ ಸುಮಾರಷ್ಟ್ಟನ್ನ ಹೇಳಿ ಹೋಗಿದ್ದಾರೆ, ಇವುಗಳೇ ಧರ್ಮಗಳಾಗಿ ರೂಪುಗೊಂಡಿವೆ. ಕಾಲಕ್ಕೆ ತಕ್ಕಂತೆ ಇವುಗಳೂ ಬದಲಾಗಿದ್ದು ಮತ್ತು ಆಯಾ ಸಂದರ್ಭಕ್ಕೆ ಸೂಕ್ತವಾದ ಹೊಸತು ರೂಪುಗೊಂಡಿದ್ದೂ ಇದೆ. ಈ ಧರ್ಮಗಳನ್ನು ಮತಗಳನ್ನಾಗಿಸಿ, ಗುಂಪುಗಳನ್ನಾಗಿಸಿ ನಡುವೆ ವಿವಾದಗಳು ಹುಟ್ಟಿಕೊಂಡಿವೆ, ಈ ಮತ – ಮೌಢ್ಯ ಮಾತ್ರ ಒಪ್ಪುವಂತದ್ದಲ್ಲ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ನಮಗೆ ಬೇಕಿದೆ, ಜಗದ ಎಲ್ಲರನ್ನು ಒಳಗೊಳ್ಳಿಸಿಕೊಳ್ಳುವ, ಗೌರವಿಸುವ ಭಾವನೆ, ಮೌಲ್ಯಗಳು ನಮ್ಮದಾಗಿರಬೇಕು,” ಅನ್ನೊದೆ ನಮ್ಮ ಮಾನವತಾವಾದಿಯ ಸಂದೇಶ.
ಆ… ಮೊನೋಕಲ್ಚರ್ನ ಹುಳು ನಮ್ಮ ತಲೆಯನ್ನ ಹೊಕ್ಕಿ, ಇದನ್ನೆಲ್ಲಾ ಮರೆತು ತುಂಬಾ ಮುಂದೇ ಬಂದಿದಿವೇನೋ ಅನ್ಸುತ್ತೆ. ಅದರಿಂದಾನೆ ನಮ್ಮ ನಡುವೆ ಇರುವ ಸಾಂಸ್ಕೃತಿಕ ವೈವಿಧ್ಯತೆ, ಜೀವ ವೈವಿಧ್ಯತೆಗಳನೆಲ್ಲಾ ಮುರಿದು ಏಕರೂಪಿಯಾಗಿಸಲು ಪಣತೊಟ್ಟಿದ್ದೇವೆ. ಹೀಗೆ… ಮರೆತ ಇವುಗಳನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾನೆ ಕಳೆದ ಡಿಸೆಂಬರ್‌ನಲ್ಲಿ ಕುಪ್ಪಳಿಯ ಕವಿಮನೆಯಿಂದ ಹೊರಟು ಮೂಡಿಗೆರೆಗೆ ಬಂದು ನಿಂತಿದ್ದ ಬೈಕ್‌ರ್‍ಯಾಲಿ ಈಗ ದೇಶಿ ಸಮಾಜವಾದಿ ತೇಜಸ್ವಿ ಮನೆಯಿಂದ ಮಂಗಳೂರಿನವರೆಗೆ ಹೊರಟಿರೋದು. ರಾಜ್ಯದ ವಿವಿಧ ಜಿಲ್ಲೆಗಳ ಯುವಜನರನ್ನ ಒಳಗೊಂಡ ತಂಡವು ದಿನಾಂಕ ೨೨ ಆಗಸ್ಟ್ ನಿಂದ ೨೪ ಆಗ
ನಮಗೆ ನಮ್ಮ ಸಮಾಜದ ಹೊರಗಿನ ವಿಶ್ವಸಮಾಜದ ಪರಿಚಯವಾಗಲು ಇಲಿಗಳು ಬಿಲದಿಂದ ಕಲ್ಲುಗಳನ್ನು ಎತ್ತಿಟ್ಟರೂ ಸಾಕಲ್ಲವೇ ? ತೇಜಸ್ವಿಯವರ ಈ ಮಾತನ್ನ ನಾವಂತೂ ನಂಬ್ತೀವಿ, ನೀವೂ ನಮ್ಮ ಪ್ರಯತ್ನದ ಜೊತೆ ಸೇರ್‍ಕೊತ್ತೀರಾ ಅಲ್ವಾ…?
ಸ್ಟ್‌ವರೆಗೆ ನಡೆಯುವ ಮೂರು ದಿನಗಳ ಬೈಕ್ ರ್‍ಯಾಲಿಯಲ್ಲಿ ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ, ಬೆಳ್ತಂಗಡಿ, ಮಡಂತ್ಯಾರು, ಪುಂಜಾಲಕಟ್ಟೆ, ಬಂಟ್ವಾಳ ಈ ಎಲ್ಲಾ ಕಡೆಗಳಲ್ಲಿ ಕಾಲೇಜಿನ ಯುವಜನರೊಂದಿಗೆ ಮಾತನಾಡುತ್ತಾ, ಹಾಡುಹಾಡುತ್ತಾ ಮುನ್ನೆಡೆಯುವ ಯೋಜನೆ ಇದ್ದು ಮಂಗಳೂರಿನಲ್ಲಿ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ರವಿಕುಮಾರ್

Comments

Popular posts from this blog